ಕರ್ನಾಟಕ

ದಿನಸಿ ಕಿಟ್ ಕೊಟ್ಟಿದ್ದು ಎಎಪಿ‌ ನಾಯಕರು ಆದ್ರೆ ಪ್ರಚಾರ ಮಾಡಿಕೊಳ್ತಿರೋದು ಬಿಜೆಪಿ ಶಾಸಕ ಉದಯ್ ಗರುಡಾಚಾರ್!

ಯಾರದ್ದೋ ಸೇವೆ, ಇನ್ಯಾರದ್ದೋ ಹೆಸರಿನಲ್ಲಿ ಬಿಟ್ಟಿ ಪ್ರಚಾರ

ಬೆಂಗಳೂರು: ನೋಂದವರಿಗೆ ನೆರವಾಗುವ ಕೆಲಸವಂತೂ ಬಿಜೆಪಿಯವರು ಮಾಡಲ್ಲ, ಆದರೆ ಕಣ್ಣೀರೊರೆಸುವ ರೀತಿ ಸುಳ್ಳು ಪ್ರಚಾರ ಮಾಡುವುದರಲ್ಲಿ ಬಿಜೆಪಿಯವರು ಎತ್ತಿದ ಕೈ ಎಂಬುದು ಮತ್ತೆ ಸಾಬೀತಾಗಿದೆ.

ಬಿಟ್ಟಿ ಪ್ರಚಾರ ಪಡೆಯಲು ಬಿಜೆಪಿಯವರು ಏನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಎಎಪಿ ಮುಖಂಡ ಪ್ರಕಾಶ್ ಮತ್ತು ಸಂಗಡಿಗರು ತಮ್ಮ ಸ್ವಂತ ಹಣದಲ್ಲಿ ಬಡವರಿಗೆ ಆಹಾರ ಪದಾರ್ಥಗಳ ಕಿಟ್ ಹಂಚಿಕೆ ಮಾಡಿದ್ದರೆ ಬಿಜೆಪಿ ಕಾರ್ಯಕರ್ತನೊಬ್ಬ ಇದನ್ನು ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹಂಚಿಕೆ ಮಾಡಿದ್ದು ಎಂದು ಬಿಟ್ಟಿ ಪ್ರಚಾರ ಮಾಡುತ್ತಿದ್ದಾನೆ.

ರಮೇಶ್ ಎಂಬ ಶಾಸಕರ ಬೆಂಬಲಿಗ ಎಎಪಿ ಮುಖಂಡರು ಆಹಾರ ಪದಾರ್ಥಗಳನ್ನು ಹಂಚಿಕೆ ಮಾಡಿದ್ದ ಫೋಟೋಗಳನ್ನು ತಮ್ಮ ಶಾಸಕರು ಹಂಚಿಕೆ ಮಾಡಿದ್ದು ಎಂದು ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾನೆ.

ಬಹುಶಃ ಬಿಜೆಪಿಯವರೆಲ್ಲಾ ಹೀಗೆ ಮಾಡುತ್ತಿರಬಹುದು. ಯಾರೋ ದಾನ ಮಾಡಿದ್ದನ್ನು ತಾವು ಮಾಡಿದ್ದೆಂದು ಹಾಕಿಕೊಂಡು ಬಿಜೆಪಿಯವರು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಕೇಳಿದ್ದೆವು. ಆದರೀಗ ಇದು ರುಜುವಾತು ಆಗಿದೆ ಎಂದು ಫೇಸ್ ಬುಕ್ ನಲ್ಲಿ ಹಲವರು ಬರೆದುಕೊಂಡಿದ್ದಾರೆ.

ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ವಿಕಲಚೇತನರು, ಸೆಕ್ಯೂರಿಟಿ ಕೆಲಸ ಮಠಡುವ, ಆಟೋ ಚಾಲಕರು ಸೇರಿದಂತೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಬಡ ಕಾರ್ಮಿಕರಿಗೆ ಎಎಪಿ ಬೆಂಗಳೂರು ನಗರ ಉಪಾಧ್ಯಕ್ಷರಾದ ಪ್ರಕಾಶ್ ಮತ್ತವರ ತಂಡ ಹನುಮಂತನಗರ, ಸುಂಕೇನಹಳ್ಳಿ, ಮಡಿವಾಳ ಮಾಚಿದೇವ ಕ್ವಾರ್ಟರ್ಸ್ ಸೇರಿದಂತೆ ಹಲವೆಡೆ ಭಾನುವಾರ ದಿನಸಿ ಕಿಟ್ ವಿತರಣೆ ಮಾಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!